ಬರೋ, ತಾಮಸ್
	1909. ತೌಲನಿಕ ಇಂಡೋ ಆರ್ಯನ್ ಹಾಗೂ ತೌಲನಿಕ ದ್ರಾವಿಡ ಭಾಷಾವಿಜ್ಞಾನಗಳಿಗೆ ಸಂಬಂಧಿಸಿದಂತೆ ಅನೇಕ ಗ್ರಂಥಗಳನ್ನೂ ಅಸಂಖ್ಯಾತ ಲೇಖನಗಳನ್ನೂ ಪ್ರಕಟಿಸಿರುವ ದೊಡ್ಡ ವಿದ್ವಾಂಸ. ಹುಟ್ಟಿದ್ದು ವೆಸ್ಟ್‍ಮೋರ್‍ಲ್ಯಾಂಡಿನ (ಯುಕ್) ಕಿರ್ಕ್‍ಬಿ ಲಾನ್ಸ್‍ಡೇಲಿನ ಸಮೀಪದಲ್ಲಿ. ಕೇಂಬ್ರಿಜ್ಜಿನ ಕ್ರೈಸ್ಟ್ ಕಾಲೇಜಿಗೆ ಸೇರಿ (1927) ಪ್ರಾಚೀನ ಕೃತಿಗಳನ್ನೂ ಸಂಸ್ಕøತ ಪಾಳಿ ಮತ್ತು ಪ್ರಾಕೃತ ಮೊದಲಾದ ಪ್ರಾಚ್ಯ ಭಾಷೆಗಳನ್ನೂ ಅಧ್ಯಯನ ಮಾಡಿದ. 1935ರಿಂದ 1937ರವರೆಗೆ ಕ್ರೈಸ್ಟ್ ಕಾಲೇಜಿನಲ್ಲಿ ಸಂಶೋಧನ ವಿದ್ಯಾರ್ಥಿಯಾಗಿ ಕೆಲಸ ಮಾಡಿ 1937ರಿಂದ 1944ರ ವರೆಗೆ ಬ್ರಿಟಿಷ್ ಮ್ಯೂಸಿಯಮ್ಮಿನಲ್ಲಿ ಪ್ರಾಚ್ಯ ಮುದ್ರಿತ ಗ್ರಂಥಗಳ ಮತ್ತು ಹಸ್ತಪ್ರತಿಗಳ ವಿಭಾಗದಲ್ಲಿ ಸಹಾಯಕ ರಕ್ಷಕನಾಗಿದ್ದು ಮುಂದೆ 1944ರಿಂದ 1976ರವರೆಗೆ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಸ್ಕøತದ ಬೋಡೆನ್ ಪ್ರಾಧ್ಯಾಪಕನಾಗಿದ್ದ.

	ಈತನ ಕೆಲವು ಮುಖ್ಯಕೃತಿಗಳು ಹೀಗಿವೆ: ದಿ ಪರ್ಜಿ ಲ್ಯಾಂಗ್ವೇಜ್ (1953 ಎಸ್. ಭಟ್ಟಾಚಾರ್ಯ ಅವರೊಂದಿಗೆ); ದಿ ಸಂಸ್ಕøತ ಲ್ಯಾಂಗ್ವೇಜ್ (1955); ಎ ದ್ರವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ (1961-ಮರೆ ಬಿ. ಎಮೆನೊ ಅವರೊಂದಿಗೆ); ದ್ರವಿಡಿಯನ್ ಬಾರೋಯಿಂಗ್ಸ್ ಫ್ರಮ್ ಇಂಡೊ-ಆರ್ಯನ್ (1962) ಮರೆ ಬಿ. ಎಮೆನೊ ಅವರೊಂದಿಗೆ); ಎ ದ್ರೆವಿಡಿಯನ್ ಎಟಿಮೊಲಾಜಿಕಲ್ ಡಿಕ್ಷನರಿ-ಸಪ್ಲಿಮೆಂಟ್ (1968-ಎಂ. ಬಿ. ಎಮೆನೊ ಅವರೊಂದಿಗೆ) ಮತ್ತು ದಿ ಪೆಂಗೋ ಲ್ಯಾಂಗ್ವೇಜ್ (1970-ಬಿ. ಭಟ್ಟಾಚಾರ್ಯ ಅವರೊಂದಿಗೆ).
(ವಿ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ